ಪೈರುಗಳ ಒರಗುವಿಕೆ -
	ಪೈರುಗಳು ಉದ್ದಕ್ಕೆ ಬೆಳೆದು ತೆನೆಗಳ ಭಾರದಿಂದ ಕಾಂಡ ಮುರಿದು ನೆಲಕ್ಕೆ ಬೀಳುವುದನ್ನು ಒರಗುವಿಕೆ (ಲಾಡ್ಜಿಂಗ್) ಎನ್ನುತ್ತಾರೆ. ಇದರಿಂದ ಧಾನ್ಯ ನಾಶ ಮತ್ತು ಮೇವಿನ ನಾಶವಾಗಿ ರೈತನಿಗೆ ನಷ್ಟವಾಗುತ್ತದೆ. ಒರಗುವಿಕೆಯ ನಿವಾರಣೆಗೆ-ಉತ್ತಮ ಫಸಲು ಮತ್ತು ಅದನ್ನು ಸಮರ್ಥವಾಗಿ ಧರಿಸಬಲ್ಲ ಪೈರಿನ ಕಾಂಡ ಮುಖ್ಯ.

	ಒರಗುವ ಗುಣ ಆನುವಂಶಿಕ, ಅದನ್ನು ವೈಜ್ಞಾನಿಕ ವಿಧಾನಗಳಿಂದ ಸರಿಪಡಿಸಬಹುದು. ಗಿಡ್ಡ ತಳಿಗಳು ಆಳವಾಗಿ ಬೇರೂರಿ ಅಗಲಕ್ಕೆ ಬೇರುಗಳನ್ನು ಹರಡಿ ಭಾರದ ತೆನೆಗಳನ್ನು ಹೊತ್ತು ನೆಟ್ಟಗೆ ನಿಲ್ಲುತ್ತವೆ. ಸಂಕರ (ಹೈಬ್ರಿಡ್) ಜೋಳ ಹಾಗೂ ಸಜ್ಜೆಯ ತಳಿಗಳು, ಮೆಕ್ಸಿಕನ್ ಗೋಧಿ ಹಾಗೂ ತೈವಾನ್ ಬತ್ತದ ಜಾತಿಗಳು ಒರಗದೇ ನೆಟ್ಟಗೆ ನಿಲ್ಲಬಲ್ಲವು. ಆದ್ದರಿಂದ ಅವು ಅಧಿಕ ಇಳುವರಿ ನೀಡುತ್ತವೆ. ಒರಗುವ ಗುಣದ ನಿವಾರಣೆ, ಅಧಿಕ ಉತ್ಪಾದನೆಗೆ ಮುಖ್ಯ.  						(ಸಿ.ವಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ